Sunday, December 27, 2009

Vikas, Supreetha , Anitha Crowned Mr, Ms and Mrs Bunt at Akanksha 2009


ಬಂಟರ ಸಂಘ ಮುಂಬಯಿ ಯುವ ವಿಭಾಗದ ಆಕಾಂಕ್ಷ-೨೦೦೯ : ವಿಕಾಸ್ ಮಿಸ್ಟರ್ ಬಂಟ್ ಮತ್ತು ಸುಪ್ರಿತಾ ಮಿಸ್ ಬಂಟ್ ಹಾಗೂ ಅನಿತಾ ಮಿಸೆಸ್ ಬಂಟ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಆಶ್ರಯದಲ್ಲಿ ಆಕಾಂಕ್ಷ-೨೦೦೯ ಕಾರ್ಯ ಕ್ರಮವನ್ನು ಇಂದಿಲ್ಲಿ (೨೬.೧೨.೦೯) ಭಾನುವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾಗಿತ್ತು. ಆಕಾಂಕ್ಷ-೨೦೦೯ ಕಾರ್ಯಕ್ರಮದಲ್ಲಿ ಮಿಸ್ಟರ್ ಬಂಟ್-೨೦೦೯ ಹಾಗೂ ಮಿಸ್ ಬಂಟ್-೨೦೦೯ ಮತ್ತು ವಿಶೇಷ ಕಾರ್ಯಕ್ರಮವಾಗಿ ಮಿಸೆಸ್ ಬಂಟ್-೨೦೦೯ ವೈಶಿಷ್ಟ್ಯಮ ಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಮಿಸ್ಟರ್ ಬಂಟ್-೨೦೦೯ ವಿಜೇತರಾಗಿ ವಿಕಾಸ್ ಶೆಟ್ಟಿ ಆಯ್ಕೆಯಾದರೆ, ಮಿಸ್ಟರ್ ಬಂಟ್ ಪ್ರಥಮ ರನ್ನರ್‍ಸ್ ಸ್ಥಾನದಿಂದ ನಿಖಿಲ್ ಶೆಟ್ಟಿ ವಿಜೇತರೆಣಿಸಿದರು. ರಾಕೇಶ್ ಶೆಟ್ಟಿ ಮಿಸ್ಟರ್ ಬಂಟ್ ದ್ವಿತೀ ಯ ರನ್ನರ್‍ಸ್ ಸ್ಥಾನ ಗಿಟ್ಟಿಸಿ ಕೊಂಡರು.

ಯುವತಿಯರ ವಿಭಾಗದಲ್ಲಿ ಮಿಸ್ ಬಂಟ್-೨೦೦೯ ಆಗಿ ಸುಪ್ರಿತಾ ಶೆಟ್ಟಿ ಜಯಶೀಲರಾದರೆ, ತೇಜೆಸ್ವೀ ಶೆಟ್ಟಿ ಇವರು ಮಿಸ್ ಬಂಟ್ ಪ್ರಥಮ ರನ್ನರ್‍ಸ್ ಸ್ಥಾನವನ್ನು ಪಡೆದರು. ಚೈತನ್ಯ ಶೆಟ್ಟಿ ಮಿಸ್ ಬಂಟ್ ದ್ವಿತೀಯ ಸ್ಥಾನ ವಿಜೇತರೆಣಿಸಿದರು.

ಶ್ರೀಮತಿ ಅನಿತಾ ಪ್ರಸಾದ್ ಶೆಟ್ಟಿ ಇವರು ಮಿಸೆಸ್ ಬಂಟ್-೨೦೦೯ ಎಂದೆಣಿಸಿ ಕೊಂಡರೆ, ಶ್ರೀ ಮತಿ ದಿವ್ಯ ಜಿ. ಶೆಟ್ಟಿ ಮಿಸೆಸ್ ಬಂಟ್ ಪ್ರಥಮ ರನ್ನರ್‍ಸ್ ಹಾಗೂ ಶ್ರೀಮತಿ ಶ್ರೇಯಾ ಶೆಟ್ಟಿ ಮಿಸೆಸ್ ಬಂಟ್ ದ್ವಿತೀಯ ಸ್ಥಾನದಿಂದ ಶೆಟ್ಟಿ ವಿಜೇತರಾದರು.

ಅಂತಿಮ ಸುತ್ತಿನಲ್ಲಿ ಇಂದು ಪ್ರತಿಯೊಂದು ವಿಭಾಗದಲ್ಲಿ ೯ ಸ್ಪರ್ಧಾಳುಗಳು ರ್‍ಯಾಂಪ್‌ನಲ್ಲಿ ನಡೆದು ತಮ್ಮ ಪ್ರತಿಭೆಕ್ರಿಯನ್ನು ತೋರ್ಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಲ್ ದ ಬೆಸ್ಟ್ ಗೋಲ್‌ಮಾಲ್-ಗೋಲ್‌ಮಾಲ್ ಖ್ಯಾತಿ ಯ ಬಾಲಿವುಡ್ ಚಿತ್ರದ ರೋಹಿತ್ ಶೆಟ್ಟಿ ಆಗಮಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ವಹಿಸಿದ್ದರು. ಗೌರವ ಅತಿಥಿಯಾಗಿ ಯುವ ವಿಭಾ ಗದ ಕಾರ್ಯಾಧ್ಯಕ್ಷ ಗೌತಮ್ ಎಸ್.ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಂ.ಹೆಗ್ಡೆ ಹಾಗೂ ತೀರ್ಪುಗಾರರಾಗಿದ್ದ ಮಧುಶ್ರೀ ಶೆಟ್ಟಿ, ಡಾ| ನಿರ್ಮಲಾ ಶೆಟ್ಟಿ, ವಸಂತ್ ಟಿ.ಶೆಟ್ಟಿ ಮತ್ತು ಡಾ| ಪ್ರಮೀಳಾ ಶೆಟ್ಟಿಶಾಸಕ ಕೃಷ್ಣ ಹೆಗ್ಡೆ ವಿಶೇಷ ಆಮಂತ್ರಿತರಾಗಿ ಕಾರ್ಯ ಕ್ರಮಕ್ಕೆ ಮೆರುಗು ನೀಡಿ ವಿಜೇತ ಸ್ಪರ್ಧಾಳುಗಳಿಗೆ ಕಿರೀಟ ಧರಿಸಿ, ಗೌರವ ಶಾಲು ಧರಿಸಿ, ಪ್ರಶಸ್ತಿ-ಸ್ಮರಣಿ ಕೆಗಳನ್ನು ಪ್ರದಾನಿಸಿ ಸನ್ಮಾನಿಸುತ್ತಾ ವಿಜೇತರನ್ನಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಲ| ಮಾಲಾ ಶೆಟ್ಟಿ ಚೆಂಬೂರು, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಆರ್ವಿನ್ ಎಸ್.ಶೆಟ್ಟಿ, ಗೌ| ಕಾರ್ಯದರ್ಶಿ ರೇಶ್ಮಾ ಕಿರಣ್ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರಸನ್ನ ಜೆ.ಶೆಟ್ಟಿ, ಜತೆ ಕಾರ್ಯದರ್ಶಿ ವಿಜೇತಾ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ರಿತೇಶ್ ಆರ್.ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಸಿ‌ಎ| ಶಂಕರ್ ಶೆಟ್ಟಿ, ಗೌ| ಕಾರ್ಯದರ್ಶಿ ವಿ.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರಭಾಕರ್ ಎಲ್.ಶೆಟ್ಟಿ, ಜತೆ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ, ಜತೆ ಕೋಶಾಧಿಕಾರಿ ಸಿ‌ಎ| ಸತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಯುವ ವಿಭಾಗದ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿದರು. ಅನ್ವೀಶ್ ವಿ.ಶೆಟ್ಟಿ, ಪ್ರಶಾಂತ್ ಶೆಟ್ಟಿ, ಕು| ಸೋನಾಲಿ ಶೆಟ್ಟಿ ಮತ್ತು ಕು| ಸನ್ನಿಧಿ ಐಕಳ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ ಹಾಗೂ ಪ್ರಭಾ ಕರ್ ಎಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


No comments:

Post a Comment