Thursday, September 23, 2010

ಮುಂಬಯಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೇಳೈಸಿದ ತುಳುನಾಡ ಸಂಸ್ಕೃತಿ...

ಮುಂಬಯಿ ಉಪನಗರ ಸಾಕಿನಾಕ ಪರಿಸರದ ಶಿವಗರ್ಜನ ಸಾರ್ವಜನಿಕ ಗಣೇಶೋತ್ಸವ ಮಂಡಳದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ತುಳುನಾಡ ಕಲೆಗಳಾದ ಹುಲಿವೇಷ ಹಾಗೂ ಯಕ್ಷಗಾನದ ಶ್ರೀದೇವಿ ಮತ್ತು ಮಹಿಷಾಸುರ ಪಾತ್ರಧಾರಿಗಳು ಕಂಡು ಬಂದರು. ಊರಿನಿಂದ ಬಂದ ಕಮಲಾಕ್ಷ ಬಜಿಲಕೆರೆ ಮತ್ತು ಬಳಗದವರು ಹುಲಿವೇಷ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಜೇಶ್ MOILY ಮಹಿಷಾಸುರನಾಗಿ ಮತ್ತು ಶ್ರಿದೇವಿ ಪಾತ್ರಧಾರಿಯಾಗಿ ದಿವೇಶ್ ಬಂಗೇರ ಎಲ್ಲರನ್ನೂ ರಂಜಿಸಿದರು.  ಪರಿಸರದ ತುಳು-ಕನ್ನಡಿಗರಲ್ಲದೆ ಕನ್ನಡೇತರರೂ ಹುಚ್ಚೆದ್ದು ನಲಿಯುತಿದ್ದುದು ಕಂಡು ಬರುತಿತ್ತು.                         

ಚಿತ್ರ/ವರದಿ - ಮನೋಜ್ ಶೆಟ್ಟಿ ನಕ್ರೆ