ಸಾಕಿನಾಕ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಅದ್ದೂರಿಯ ನವರಾತ್ರಿ ಆಚರಣೆ
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸಾಕಿನಾಕ ಇವರಿಂದ ಪ್ರತೀ ವರುಷದಂತೆ ಈ ಬಾರಿಯೂ ನವರಾತ್ರಿ-ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲ್ಪಟ್ಟಿತು. ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಗಳು ನಡೆದು, ರವಿವಾರ ದಿ 17ನೇ ಅಕ್ಟೊಬರ್ ದಸರಾದಂದು ಬೆಳಿಗ್ಗೆ ಸಾಕಿನಾಕದ ಶ್ರೀ ನಿತ್ಯಾನಂದ ಭಜನಾ ಮಂಡಳಿಯವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆದ ನಂತರ ವಿಶೇಷ ಅಲಂಕೃತ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿತರಣೆ ನಡೆಯಿತು. ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆರವೇರಿದ್ದರು.
ಚಿತ್ರ-ವರದಿ: ಮನೋಜ್ ಶೆಟ್ಟಿ ನಕ್ರೆ
No comments:
Post a Comment