Monday, February 7, 2011

News/Pics -Haladi Kumkum & Bhakti Sangeet Prog in Sakinaka


ಸಾಕಿನಾಕ: ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಸಂಭ್ರಮದ ಹಳದಿ-ಕುಂಕುಮ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ

ಚಿತ್ರ/ವರದಿ: ಮನೋಜ್ ಶೆಟ್ಟಿ ನಕ್ರೆ

ಮುಂಬಯಿ ಫೆ.7: ಉಪನಗರ ಸಾಕಿನಾಕದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಿತ್ರ ಮಂಡಳಿಯ ಪೂಜಾ ಸಮಿತಿಯ ಮಹಿಳಾ ಸದಸ್ಯೆಯರಿಂದ ಹಳದಿ-ಕುಂಕುಮ ಕಾರ್ಯಕ್ರಮವನ್ನು ರವಿವಾರ ಫೆ.6ರಂದು ಮಂಡಳಿಯ ಶ್ರೀದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿ ನೆರವೇರಿತು. ಪರಿಸರದ ಸುಮಂಗಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹಳದಿ ಕುಂಕುಮವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಇದಕ್ಕೂ ಮುನ್ನ ಕುಮಾರಿ ವಂದನಾ ನಿತ್ಯಪ್ರಕಾಶ್ ಎನ್ ಶೆಟ್ಟಿ ಮತ್ತು ಬಳಗದವರಿಂದ ನಡೆದ ಭಕ್ತಿ ಸಂಗೀತ ಕಾರ್ಯಕ್ರಮ ನೆರೆದ ಸಭಿಕರನ್ನು ಮನರಂಜಿಸಿತು. ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಯಕ್ಷಗಾನ ಮಂಡಳಿಯ ಕಾರ್ಯದ್ಯಕ್ಷರಾದ ನಿತ್ಯಪ್ರಕಾಶ್ ಎನ್ ಶೆಟ್ಟಿ,, ಉಪಾದ್ಯಕ್ಷರಾದ ಕೆ ಕೆ ದೇವಾಡಿಗ ಮತ್ತು ಪ್ರಧಾನ್ ಅರ್ಚಕರಾದ ಕಮಲಕ್ಷಾ ಕೆ ಮೊಯಿಲಿ ಮತ್ತಿತರು ಉಪಸ್ಥಿತರಿದ್ದರು.

No comments:

Post a Comment