Wednesday, December 1, 2010

ಸಾಕಿನಾಕ: ಮನರಂಜಿಸಿದ ಕೋಟೆದ ಬಬ್ಬು ಯಕ್ಷಗಾನ ಪ್ರದರ್ಶನ

ಸಾಕಿನಾಕ: ಮನರಂಜಿಸಿದ ಕೋಟೆದ ಬಬ್ಬು ಯಕ್ಷಗಾನ ಪ್ರದರ್ಶನ


ಚಿತ್ರ/ವರದಿ: ಮನೋಜ್ ಶೆಟ್ಟಿ ನಕ್ರೆ


ಮುಂಬಯಿ ಉಪನಗರ ಸಾಕಿನಾಕದ ಪ್ರತಿಷ್ಠಿತ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನುರಿತ ಕಲಾವಿದರಿಂದ "ಕೋಟೆದ ಬಬ್ಬು" ಎಂಬ ತುಳು ಯಕ್ಷಗಾನವು ಕಳೆದ ಶನಿವಾರ ನ.27ರಂದು ಪ್ರದರ್ಶಿಸಲ್ಪಟ್ಟಿತು.

 

ಕಿಕ್ಕಿರಿದ ಸಭಿಕರಿಂದ ಮುಕ್ತಕಂಠದಿಂದ ಪ್ರಶಂಸಿಲ್ಪಟ್ಟ ಈ ಯಕ್ಷಗಾನವು ಸಾಕಿನಾಕ ಮೋಹಿಲಿ ವಿಲೇಜ್‍ನ ಶ್ರೀ ಆನಂದಬಾಬ ಆಶ್ರಮದ ಆವರಣದಲ್ಲಿ ನಡೆಯಿತು.

 

ಮಂಡಳಿಯ ಆಶ್ರಯದಲ್ಲಿ, ಕಲಾವಿದರಾದ ಸದಾನಂದ ಶೆಟ್ಟಿ ಕಟೀಲು ಮತ್ತು ಮನೋಜ್‍ಕುಮಾರ್ ಹೆಜ್ಮಾಡಿಯವರಿಂದ ತರಬೇತಿ ಪಡೆದ ಮಕ್ಕಳು ಈ ಸಂದರ್ಭದಲ್ಲಿ ತಮ್ಮ ಚೊಚ್ಚಲ ಯಕ್ಷಗಾನ ರಂಗಪ್ರವೇಶ ಮಾಡಿ ಸಭಿಕರನ್ನು ಮನರಂಜಿಸಿದರು.

 

ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ್ ಕಣಂಜಾರು ಮತ್ತು ನಿತೀನ್ ಅಂಚನ್, ಚಂಡೆಯಲ್ಲಿ ಕೆ ಕೆ ದೇವಾಡಿಗ ಮತ್ತು ನಿತ್ಯಪ್ರಕಾಶ್ ಶೆಟ್ಟಿ, ಮದ್ದಳೆಯಲ್ಲಿ ಇನ್ನ ಆನಂದ ಶೆಟ್ಟಿ ಮತ್ತು ಸುರೇಶ್ ಶೆಟ್ಟಿಯವರು ಸಹಕರಿಸಿದ್ದರು.

 

ಹಿರಿಯ ಕಲಾವಿದರುಗಳದ ಪ್ರಕಾಶ್ ಪಣಿಯೂರು, ಸದಾನಂದ ನಾಯಕ್, ಸದಾನಂದ ಶೆಟ್ಟಿ ಕಟೀಲು, ಕಮಲಾಕ್ಷ MOILY, ಮನೋಜ್‍ಕುಮಾರ್ ಹೆಜ್ಮಾಡಿ, ರಾಜ ತುಂಬೆ, ಸೀತಾರಾಮ್‍ಕುಮಾರ್ ಬಂಗೇರ, ಪ್ರಭಾಕರ್ ಕುಂದರ್, ಸಂತೋಷ್‍ಕುಮಾರ್ ಮುಂತಾದ ಕಲಾವಿದರು ವಿವಿದ ಪಾತ್ರಗಳಿಗೆ ಮೆರುಗು ನೀಡಿ ಪ್ರೇಕ್ಷಕರನ್ನು ರಂಜಿಸಿದರು.



No comments:

Post a Comment