Sunday, December 26, 2010

ಸಾಕಿನಾಕ: ವಿಜ್ರಂಭಣೆಯಿಂದ ನಡೆದ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಳಿಯ 11ನೇ ವಾರ್ಷಿಕ ಮಹಾಪೂಜೆ...

ಸಾಕಿನಾಕ: ವಿಜ್ರಂಭಣೆಯಿಂದ ನಡೆದ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಳಿಯ 11ನೇ ವಾರ್ಷಿಕ ಮಹಾಪೂಜೆ

 

ಚಿತ್ರ/ವರದಿ: ಮನೋಜ್ ಶೆಟ್ಟಿ ನಕ್ರೆ

 

ಮುಂಬಯಿ: ಉಪನಗರ ಸಾಕಿನಾಕದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯು ತನ್ನ 11ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆಯನ್ನು ಕಳೆದ ಶನಿವಾರ ಡಿ. 25ರಂದು ಮೊಹಿಲಿ ವಿಲೇಜ್‍ನ ಲಕ್ಶ್ಮೀನಾರಾಯಣ ಮಂದಿರದ ಆವರಣದಲ್ಲಿ ವಿಜ್ರಂಭಣೆಯಿಂದ ಆಚರಿಸಿತು. ನಗರದ ಖ್ಯಾತ ಯಕ್ಷಗಾನ ಚಂಡೆವಾದಕ ಕೆ ಕೆ ದೇವಾಡಿಗರವರ ಪುತ್ರರಾದ ದಿನೇಶ್ ದೇವಾಡಿಗರಿಂದ ಆಯೋಜಿಸಲ್ಪಡುವ ಈ ಧಾರ್ಮಿಕ ಕಾರ್ಯಕ್ರಮದ ಪೂಜ ವಿಧಿವಿಧಾನಗಳು ಶ್ರೀ ಶ್ರೀ ಗಣೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರುಗಿತು. ಶ್ರೀ ಅಂಚನ್ ಗುರುಸ್ವಾಮಿಯವರಿಂದ ಅಲಂಕೃತಗೊಂಡ ನಯನ ಮನೋಹರ ಶ್ರೀದೇವರ ಸನ್ನಿಧಾನವು ನೆರೆದಿದ್ದ ಅಸಂಖ್ಯಾತ ಭಕ್ತ ಜನರನ್ನು ಆಕರ್ಷಿಸಿತು. ಪ್ರಾತಃಕಾಲ ಗಣಹೋಮ ನಡೆದ ನಂತರ ಸಾಕಿನಾಕರ ಪ್ರಸಿದ್ಧ ಶ್ರೀ ನಿತ್ಯಾನಂದ ಭಜನಾ ಮಂಡಳಿಯವರಿಂದ ಭಕ್ತಿ-ಸಂಗೀತ ಕಾರ್ಯಕ್ರಮ ನಡೆಯಿತು. ಮಹಾಪೂಜೆ ನಂತರ ತೀರ್ಥಪ್ರಸಾದ ವಿತರಣೆ ಮತ್ತು ಅನ್ನ-ಸಂತರ್ಪಣೆ ನಡೆಯಿತು.

 

ಸ್ಥಳಿಯ ಎಸ್‍ ಇ ‍ಓ ಆಗಿರುವ ದಿನೇಶ್ ದೇವಾಡಿಗರವರು ಸಾಕಿನಾಕ ಪರಿಸರದಲ್ಲಿ ಸಾಕಿ-ಮೊಹಿಲಿ ಸಾರ್ವಜನಿಕ ಗಣೇಶೊತ್ಸವ ಮಂಡಳಿ, ಸಾಕಿ-ಮೊಹಿಲಿ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಯಿ-ಸೇವಾ ಸಂಘ ಮತ್ತು ದತ್ತ-ಸಾಯಿರಾಮ್ ಪಾದಾಯಾತ್ರ ಮಂಡಳಿ ಇವುಗಳ ಅದ್ಯಕ್ಷರಾಗಿದ್ದು ನಿರಂತರ ಸಾಮಜಿಕ ಮತ್ತು ಧಾರ್ಮಿಕ ಚಟುವಟಿಕೆಗಲ್ಲಿ ನಿರತರಾಗಿದ್ದಾರೆ. ಇತ್ತಿಚೆಗಷ್ಟೆ ಆರಂಭಗೊಂಡ ತುಳು-ಕನ್ನಡಿಗರ ಹಿತಚಿಂತಕರ ವೇದಿಕೆಯ ಗೌ. ಪ್ರ. ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.