ದಿ. ಶ್ರೀ ದೇವದತ್ತ ಭುವಾಜಿಯವರ 25ನೇ ಪುಣ್ಯತಿಥಿ ಆಚರಣೆ
ಚಿತ್ರ/ವರದಿ: ಮನೋಜ್ ಶೆಟ್ಟಿ ನಕ್ರೆ
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮತ್ತು ನಿತ್ಯಾನಂದ ಭಜನಾ ಮಂಡಳಿಗಳ ಸ್ಥಾಪಕರಾದ ದಿ. ಶ್ರೀ ದೇವದತ್ತ ಭುವಾಜಿ (ನಾರಾಯಣ ಶೆಟ್ಟಿ)ಯವರ 25ನೇ ಪುಣ್ಯತಿಥಿಯಂಗವಾಗಿ ನವಂಬರ್ 14ರಿಂದ ಆರಂಭಗೊಂಡ ಭಜನಾ ಕಾರ್ಯಕ್ರಮಗಳ ಸಮರೋಪವು ಕಳೆದ ಶನಿವಾರ ನ.20ರಂದು ನಡೆಯಿತು. ಮುಂಬಯಿಯ ವಿವಿದ ಭಜನಾ ಮಂಡಳಿಗಳು ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು. ದಿ ಶ್ರೀ ದೇವದತ್ತ ಭುವಾಜಿಯವರ ಮಕ್ಕಳಾದ ನಿತ್ಯಪ್ರಕಾಶ್ ಎನ್ ಶೆಟ್ಟಿ, ಶ್ರೀಮತಿ ಪುಷ್ಪ ಹೆಚ್ ಹೆಗ್ಡೆ ಮತ್ತು ಶ್ರೀಮತಿ ರಾಜೇಶ್ವರಿ ಎಮ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು.