Monday, May 24, 2010






ಏನೆಲ್ಲಾ ಆಸೆಗಳು, ಆಕಾಂಕ್ಷೆಗಳು, ನೀರೀಕ್ಷೆಗಳು, ಹೊಂಗನಸುಗಳು, ಹೊಣೆಗಳು, ಜತೆಗೆ ಲೊಕದ ಗತಿಯನ್ನು ಅರಿವಿಗೆ ದಕ್ಕಿಸಿಕೊಳ್ಳಲೂ ಆಗದ ಶಿಶು ಹೃದಯಗಳು -ಎಲ್ಲವನ್ನೂ ಕರಾಳ ವಿಧಿಯ ಕ್ರೂರ ಮೃತ್ಯುದಂಡ ಒಂದೇ ಬಿಸಿನಿಂದ ಆಪೋಷನ ತೆಗೆದುಕೊಂಡು ಬಿಟ್ಟಿತು. ಅಗಲಿದ ಜೀವಗಳನ್ನು ಆಧರಿಸಿದ್ದ ಹೆತ್ತವರು, ಕೈ ಹಿಡಿದವರು, ಆಶ್ರಿತರು ಅಗಲಿಕೆಯ ವೇದನೆಯ ಜತೆಗೆ ಬದುಕಿನ ಬವಣೆ ಜೀವಮಾನವಿಡೀ ನಲುಗುವ ನರಕಯಾತನೆ. ಅಗಲಿದ 158 ಜೀವಗಳಿಗೆ ಶೃದ್ಧಾಂಜಲಿ... ಅವರ ಕುಟುಂಬ ಬಂಧು ವರ್ಗಕ್ಕೆ ಎದೆಯಾಳದ ಸಹಾನುಭೂತಿ..