ಚಿತ್ರ: ಲವ್ ಗುರುಹಾಡಿದವರು: ಕಾರ್ತಿಕ್, ಬೆನ್ನಿ
ನಟರು: ರಾಧಿಕ ಪಂಡಿತ್, ತರುಣ್
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವ ಸವಿಗನಸಲಿ
ಕೈಜಾರಿ ಹೋದೆಯ ನನ್ನ ಪ್ರೀತಿಯ
ಮಣ್ಣಲ್ಲಿ ಕೂತೆಯ ನಗುತ ನಗುತ
ಕುಂತು ನಿನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿನಗೇಕೆ ನನ್ನ ಪ್ರೀತಿ ಗೊತ್ತೇ ಆಗದೆ ಹೋಯ್ತು
ಎಷ್ಟೊಂದು ಸಾರಿ ನಾ ಮನಸನ್ ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೇಕೆ ನೀ ಹೋದೆ
ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ
ನಿಂಗೆ ಅನಿಸಿಲ್ಲವೇನು ನಿಂಗಾಗೆ ಬಂದೋನು ನಾನು
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ
ಈ ಗಾಳಿ ಕಾಣಲ್ಲ ಅನುಭವವುಂಟು ಸುಳ್ಳಲ್ಲ
ಈ ಪ್ರೀತಿ ಹೀಗೇಕೆ ಹೇಳದೆ ತಿಳಿಯೋದೇ ಇಲ್ಲ
ಈ ನಿಜಾಯ್ತಿಯ ಮುನ್ನ ಕಳೆದು ಕುಂತೆ ನಾ ನಿನ್ನ