English version at below: 100 Reasons for Dr. B R Shetty to Smile
ದುಬೈ: ಬುರ್ಜ್ ಖಲೀಫಾದಲ್ಲಿ ( ಬುರ್ಜ್ ದುಬೈ) ಕನ್ನಡಿಗ!
ಮೂಲತಃ ಉಡುಪಿ (ಕಾಪು)ಯ ಬಾವಗುತ್ತು ರಘುರಾಮ
ಶೆಟ್ಟಿಯವರು 50ಕೋಟಿಯ ಖಲೀಫಾದ 100ನೇ ಮಹಡಿಯ ಒಡೆಯ. ಅದರಲ್ಲಿ ಶೆಟ್ಟರ ನಿವಾಸ...141ನೇ ಮಾಳಿಗೆಯಲ್ಲಿ ಶೆಟ್ಟರ ಬರ್ಜರಿ ಆಫೀಸು!
ಹೌದು. ಮೂಲತಃ ಉಡುಪಿ ಜಿಲ್ಲೆಯವರಾದ ಬಾವಗುತ್ತು ರಘುರಾಮ ಶೆಟ್ಟಿ ಬುರ್ಜ್ ಖಲೀಫಾ ದಲ್ಲಿ 100 ನೇ ಮಹಡಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು ವೆಚ್ಚ ಮಾಡಿದ್ದು ಬರೋಬ್ಬರಿ 50 ಕೋಟಿ.
ವಿಶ್ವದಲ್ಲೇ ಕುತೂಹಲ ಸೃಷ್ಟಿಸಿದ್ದ ಈ ಜಗತ್ಪ್ರಸಿದ್ಧ ವೈಭವೋಪೇತ ಕಟ್ಟಡ ಸೋಮವಾರ ಅದ್ಧೂರಿ ಸಮಾರಂಭದಲ್ಲಿ ಉದ್ಘಾಟನೆಯಾಯಿತು.
ಮೊದಲ ಕನ್ನಡಿಗ: ಅಬುಧಾಬಿಯ ನ್ಯೂ ಮೆಡಿಕಲ್ ಸೆಂಟರ್‌ನ ಅಧ್ಯಕ್ಷ ಬಾವಗುತ್ತು ರಘುರಾಮ ಶೆಟ್ಟಿ ವಿಶ್ವದ ವೈಭವೋಪೇತ ಕಟ್ಟಡದ 100ನೇ ಮಹಡಿ ಖರೀದಿಸಿದ ಸಂತಸದಲ್ಲಿದ್ದಾರೆ. ಹೊಸದಾಗಿ ಖರೀದಿಸಿರುವ ಸ್ಥಳವನ್ನು ಸ್ನೇಹಿತರು ಮತ್ತು ಅತಿಥಿಗಳಿಗಾಗಿ ಮೀಸಲಿಡಲು ನಿರ್ಧಾರಿಸಿದ್ದಾರಂತೆ. ಶೆಟ್ಟಿಯವರು ಖರೀದಿಸಿದ 100ನೇ ಮಹಡಿ 15 ಸಾವಿರ ಚದರ ಅಡಿಗಿಂತ ಹೆಚ್ಚು ಸ್ಥಳಾವಕಾಶ ಹೊಂದಿದೆ. 'ಇಲ್ಲಿ ನಿಂತರೆ ವಿಶ್ವದ ಎಲ್ಲ ಸ್ಥಳ ನೋಡಿದಂತಾಗುತ್ತದೆ' ಎಂದು ಶೆಟ್ಟಿ ಹೆಮ್ಮೆಯಿಂದ ಹೇಳಿಕೊಂಡರು.
ವೈಭವೋಪೇತ ಉದ್ಘಾಟನೆ: ಸಂಜೆ ನಡೆದ ವೈಭವೋಪೇತ ಸಮಾರಂಭದಲ್ಲಿ ೧ ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬುರ್ಜ್ ದುಬೈ ಉದ್ಘಾಟನೆಗೊಂಡಿತು. ಸಿಡಿಮದ್ದುಗಳ ಅಬ್ಬರ, ಸಂಗೀತಗೋಷ್ಠಿಯ ಅದ್ಭುತ ಸಮ್ಮಿಳನದಿಂದಾಗಿ ಸಮಾರಂಭ ಕಳೆಕಟ್ಟಿತು. ಈ ಕಟ್ಟಡದ ಉದ್ಘಾಟನೆಯಿಂದಾಗಿ ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ದುಬೈ ಮತ್ತೆ ಚೇತರಿಕೆ ಕಾಣುವ ಸಾಧ್ಯತೆಯಿದೆ.
ಹೊಸ ಹೆಸರು: ಉದ್ಘಾಟನೆಯಾದ ದಿನವೇ ಬುರ್ಜ್ ದುಬೈಗೆ ಸುಲ್ತಾನ್ ಶೇಕ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅತಿ ಎತ್ತರದ ಕಟ್ಟಡಕ್ಕೆ ಬುರ್ಜ್ ಖಲೀಫಾ ಎಂದು ಹೆಸರಿಟ್ಟರು. ಇದೇ ಸಂದರ್ಭದಲ್ಲಿ ವೈಭವೋಪೇತ ಕಟ್ಟಡದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದ ಪ್ರಮುಖರು ಹೊಸ ಮನೆಗೆ ಪ್ರವೇಶ ಪಡೆದರು.
ಖಲೀಫಾ ಹೈಲೈಟ್ಸ್
ಗುತ್ತಿಗೆದಾರ:ಎಮ್ಮಾರ್ ಡೆವಲಪ್ಪರ್ಸ್
ಹೈಸ್ಪೀಡ್ ಮೊಬೈಲ್ ಬ್ರಾಡ್‌ಬ್ಯಾಂಡ್:ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದಲ್ಲಿ ಇಂತಹ ಸೌಲಭ್ಯವಿರುವ ಮೊದಲ ಕಟ್ಟಡ.
೪ ಜಿ: ಶೀಘ್ರದಲ್ಲೇ ೪ಜಿ ವ್ಯವಸ್ಥೆಯೂ ಜಾರಿ.
'ಬೆಂಗಳೂರಿನಷ್ಟು ದುಬಾರಿ ಅಲ್ಲ'
'ನಾನು ಖರೀದಿ ಮಾಡಿರುವ ಬುರ್ಜ್ ದುಬೈಯ ೧೦೦ನೇ ಮಹಡಿ ಬೆಂಗಳೂರಿನಷ್ಟು ದುಬಾರಿ ಅಲ್ಲ'.
ಬುರ್ಜ್ ದುಬೈಯ ಉದ್ಘಾಟನೆ ಸಮಾರಂಭದಲ್ಲಿ ನೂರಾರು ಅಭಿನಂದನೆಗಳನ್ನು ಸ್ವೀಕರಿಸುತ್ತಿ ರುವ ಸಂದರ್ಭದಲ್ಲೇ ಕರೆಗೆ ಬಿ.ಆರ್. ಶೆಟ್ಟಿ ನೀಡಿದ ಉತ್ತರ ಇದು.
ಅವರ ಪ್ರಕಾರ, 100ನೇ ಮಹಡಿಗೆ ಅವರು ನೀಡಿದ 50 ಕೋಟಿ ರು. ಮೌಲ್ಯ ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಬಿರುಸಿಗೆ ಹೋಲಿಸಿದರೆ ಕಡಿಮೆ. ಆದರೆ, ದುಬೈಯಲ್ಲಿ ಇಷ್ಟು ಎತ್ತರದಲ್ಲಿ ಮನೆ ಹೊಂದಿರುವುದೆಂದರೆ ಹೆಮ್ಮೆಯ ಸಂಗತಿ ಎಂದರು. ಈ ಮಹಡಿಯನ್ನು ಖರೀದಿ ಮಾಡಿದ ಭಾರತೀಯ ಎಂದು ಹೆಮ್ಮೆ ಅನಿಸುತ್ತಿದೆ ಎಂದೂ ಶೆಟ್ಟಿ ಹೇಳಿದರು.
100 Reasons to Smile
4 January 2010. Burj Dubai. That will be the new address of Dr B.R.Shetty, the Managing Director and CEO of NMC Group.
Dr Shetty is one of the select few to be able to call the world's most prestigious address home.
As the world's tallest building opens its doors today, the happiest lot are perhaps those who are going to enjoy the pleasure and privilege of high living from 19th to 108th floors of the magnificent tower that offers breathtaking views like nowhere else in the world.
Like the owners of other 899 residences, Dr Shetty is also beaming with pride and excitement about the opening of the iconic tower.
"100, Burj Dubai. Wow! What an address! That was what the Emaar official told me when he allotted the 100th floor in my name on the first day of selling space in Burj Dubai," recollected Dr Shetty.
With a habit of taking possession of magnificent houses and buildings that he fancies, Dr Shetty did not have to think twice about booking his own space in Burj when the sale of office spaces and residences was announced much before the tower took shape.
"Sometimes my children blame me saying I am making unnecessary investments. But, never in this case. Like the entire world, they are also highly appreciating me for taking this decision," said Shetty whose initial plan was, however, to book just one single bedroom flat.
Surprisingly, after the long hours of waiting in the queue of property buyers, he was finally offered an entire floor of three flats. Additionally, he bought another floor (141) for his office purposes, both at the initial rate of Dh3,000 per sq.ft.
While the 100th floor will be used for residential purpose, the 141st floor will house his personal office. "My private corporate office will now be on the 141st floor of Burj. It will be known as Dr Shetty's Office, Burj Dubai," said a jubilant Shetty.
After 36 years of his life in the UAE, Dr Shetty — he has built up a conglomerate of businesses in various countries — is planning to move into the world's tallest building as soon as the builders hand over the keys.
"I am really excited about attending the inaugural ceremony. I already had the privilege of visiting the 100th floor during the period of slab work over there. I was very thrilled that I was the only person from outside who was allowed entry onto that floor along with senior Emaar officials and workers. I may not be staying in Burj every day. But, as and when I can, I will go there and relax," Dr Shetty added.